ಹನಿ ಕವನಗಳು

ಮನಮುಟ್ಟುವಂತಿತ್ತು
ಕಿವಿತಟ್ಟುವಂತಿತ್ತು
ಮುದಹುಟ್ಟುವಂತಿತ್ತು
ಮೊದಲನೇ ಚರಣ.
ಮುಂದಿನದೆಲ್ಲ
ಬರೀ ಪುರಾಣ.

-ತುಂಟಶೀನ
15/03/2014


---------------------------------

ಬೆದರದಲೆ ಬೆರಗಾಗಿ ನಡುಗಿದೆ
ನಿನ್ನ ನೋಡಿದ ಆ ಕ್ಷಣ
ಸುರಿವ ಮಳೆಯಲು ಬೆವರ ಒಡೆಸಿದೆ
ನಿನ್ನ ಸೋಕಿದ ತಕ್ಷಣ

-ತುಂಟಶೀನ
6-3-2014


----------------------------------
ಮಂದಹಾಸವ ಮೆತ್ತಿ ಮೊಗದಲಿ

ಮಿಂದೆ ಒಲವಿನ ಕೊಳದಲಿ
ಮುತ್ತು ಮಾಗಿದ ಚಿಪ್ಪಿನೊಡಲಲಿ
ಕಂಡೆ ಕಂದನ ಬಳುವಳಿ

-ತುಂಟಶೀನ
6-3-2014

----------------------------


ಬೆದರದಲೆ ಬೆರಗಾಗಿ ನಡುಗಿದೆ

ನಿನ್ನ ನೋಡಿದ ಆ ಕ್ಷಣ
ಸುರಿವ ಮಳೆಯಲು ಬೆವರ ಒಡೆಸಿದೆ
ನಿನ್ನ ಸೋಕಿದ ತಕ್ಷಣ

-ತುಂಟಶೀನ
6-3-2014


-------------------------------------------ಸುಖ ಅರಸಿ ಬಂದಾಗ ಸುಧಾರಿಸಿಕೊಬೇಕು 

ನೋವ್ ಅರಸಿ ಬಂದಾಗ ನಿವಾರಿಸಿಕೊಬೇಕು 
ಸಾವ್ ಅರಸಿ ಬಂದಾಗ ಸಾವರಸಿಕೊಬೇಕು 
ಹೋಗಲು ಸಾವರಸಿಕೊಬೇಕು 
- ತುಂಟಶೀನ 
5-3-2014


------------------------------------------

ನಭದಲ್ಲಿನಾ ಹಬೆಯ ಸಭೆಯಲ್ಲಿ ಸಾಲಾಗಿ
ಉಭಯ ಕುಶಲೋಪರಿಯು ನಡೆಯುತಿದೆ ತಾನಾಗಿ
ಅಭಯ ಹಸ್ತವತೂಗಿ ವಸುಂಧರೆಗೆ ತಲೆಬಾಗಿ
ಅಭಿಷೇಕ ವನಸಿರಿಗೆ ತುಷಾರ ಸಿಂಚನವಾಗಿ
-ತುಂಟಶೀನ
5-3-2014


-------------------------------------------


ಪ್ರಗತಿಅನಾದಿಕಾಲದಿಂದ ಬಳಸುತಿದ್ದೆವು ಗಡಿಗೆ

ಊಟಮಾಡುತಿದ್ದೆವಾಗ ಶುದ್ಧ ಮನೆ ಅಡಿಗೆ
ನಮ್ಮ ನಡಿಗೆಯು ಈಗ ಪ್ರಗತಿ ಪಥದೆಡೆಗೆ
ಮನೆಯಲಿರಲು ಸಮಯವಿಲ್ಲ ಊಟ ಹೊರಗಡೆಗೆ
                         ನಮ್ಮ ಊಟ ಹೊರಗಡೆಗೆ


                    - ತುಂಟಶೀನ   16/02/2014                                              ------------------------------      ಚಿತ್ತನಾ ಉಲಿದ ಮಾತಿಗೆ

ಉತ್ತರಿಸದವರತ್ತ 
ಹರಿಯುವುದಿಲ್ಲ
ನನ ಚಿತ್ತ.


-------------------------------    ಭಾಯಿಮೂಗಿನಲಿ 

ನತ್ತಿರಲು
ಅನಿಸುವಳು ಬಾಯಿ
ಜೇಬಿನಲಿ
ಕತ್ತಿ ಇರೆ
ಅನಿಸುವನು ಭಾಯಿ


------------------------------         ಚಾಡಿನನ್ನವಳಿಗೆ ಕೇಳಿಸಿದೆ ನಾ ಬರೆದ

ಕವಿತೆಗಳ ಮುದ್ದಾಗಿ ಹಾಡಿ
ಅವಳೆಂದಳು ಈಗ ಮಲಗಿ ಸಾಕು
ನಿಮ್ಮದಿದ್ದಿದೆ ರಾಡಿ

ಮನ ನೊಂದು ನಾಹೊದ್ದು ಮಲಗಿದೆ
ಅವಳತ್ತ ಬೆನ್ನು ಮಾಡಿ
ಅವಳೆದ್ದು ಕುಳಿತು ಶುರುಹಚ್ಚಿದಳು
ಅವರಿವರ ಚಾಡಿ------------------------------       ಗೊರಕೆಅವಳ ನೆನೆಪಾಗಿ

ಬರುತ್ತಿರಲಿಲ್ಲ ನಿದ್ದೆ,
ಎಷ್ಟೋಬಾರಿ ಇರುಳೆಲ್ಲ
ಕುಳಿತಿದ್ದೆ ಎದ್ದೇ.
ಪಕ್ಕದಲ್ಲೆ ಇದ್ದರೂ
ಬರುತ್ತಿಲ್ಲ ನಿದ್ದೆ
ಗೊರಕೆ ಸದ್ದಿಗೆ ಹಾರಿ
ಇರುಳೆಲ್ಲ ಕುಳಿತಿರುವೆ ಎದ್ದೇ.


-------------------------------

No comments:

Post a Comment