ಸಂಪದಕ್ಕೆ

ಸಂಪದಕ್ಕೆ ಮೊಟ್ಟಮೊದಲು ಬರೆದ ಕವಿತೆ

ಸಂಗಮದ ಸಂಭ್ರಮ

March 17, 2013 - 9:57pm
shejwadkar
3ಸೊಳ್ಳೆಗಳು ಕಾಡಿದರು ಕೆರೆಯುವುದ ಮರೆತಿರುವೆ

ಸೊಣಗಗಳು ಬೊಗಳಿದರು ಜಗ್ಗದೇ ಕುಳಿತಿರುವೆ

ಸೊಗಸಾದ ಶಬ್ದಗಳ ಹುಡುಕ್ಯಾಡಿ ಬರೆದಿರುವೆ

ಸೊಂಪಾಗಿ ಸೊಗಯಿಸೊ ಕನಸುಗಳ ಕಂಡಿರುವೆಸಂಪದಕೆ ಸ್ವರವಾಗಿ ಸೇರಬಯಸುವೆನಿಂದು

ಸಮಯಸಿಕ್ಕಾಗೆಲ್ಲ ಸಂಗಮಿಸುವೆನು ಬಂದು

ಸರಿತಪ್ಪುಗಳ ಅಳೆದು ಸಂಭ್ರಮಿಸಿರೀ ನಿಂದು

ಸಂಪದದೊಳಿಹ ಸಕಲ ಕವಿಶ್ರೇಷ್ಥರೂ ಬಂದು


                                                            - ತುಂಟ ಶೀನ

No comments:

Post a Comment